For regular use at low price:
Toilet cleaner/Handwash & floor cleaner 👍
- Vishweshwar Bhat Moleyar, Rtd. AGM, Karnataka Bank
ನಾವು ಸಿಯೋ ಪ್ರಾಡಕ್ಟ್ ನ ಎಲ್ಲ ಡಿಟೆರ್ಜೆಂಟ್ ಲೋಷನ್ ಗಳನ್ನು ಸುಮಾರು ಒಂದು ವರ್ಷದಿಂದ ಉಪಯೋಗಿಸುತ್ತಿದ್ದೇವೆ. ಕೈ ತೊಳೆಯುವ, ಪಾತ್ರೆ ತೊಳೆಯುವ ನಿತ್ಯ ಉಪಯೋಗಿ ಲೋಷನ್ ಗಳು ಚರ್ಮಕ್ಕೆ ಹಿತಕಾರಿ ಆಗಿದ್ದುಕೊಂಡೇ ಸ್ವಚ್ಛಗೊಳಿಸಲು ಪರಿಣಾಮಕಾರಿಯೂ ಆಗಿವೆ. ಅದೇ ರೀತಿಯಲ್ಲಿ ಬಟ್ಟೆ ಒಗೆಯುವ, ನೆಲಕ್ಕೆ ಬಳಸುವ ಲೋಷನ್ ಗಳೂ ಸೌಮ್ಯವಾದ ಗಂಧ ಹೊಂದಿದ್ದು ನಿತ್ಯ ಬಳಕೆಗೆ ಸೂಕ್ತವಾಗಿವೆ. ನಮ್ಮ ಮನೆಯೊಳಗೆ ನಮ್ಮೊಂದಿಗೆ ವಾಸಿಸುವ ನಾಯಿಗೂ ಈ ಫ್ಲೋರ್ ಕ್ಲೀನರ್ ನ ಬಳಕೆಯು ಹೊಂದುತ್ತದೆ. ನಮ್ಮ ಮೈತ್ರಿ ಆಸ್ಪತ್ರೆಯಲ್ಲಿಯೂ ಹ್ಯಾಂಡ್ ವಾಶ್, ಟಾಯ್ಲೆಟ್ ಮತ್ತು ನೆಲ ಸ್ವಚ್ಛಗೊಳಿಸಲು ನಾವು ಬೇರೆ ಬೇರೆ ಸಿಯೋ ಉತ್ಪನ್ನಗಳನ್ನೇ ಬಳಸುತ್ತಿದ್ದೇವೆ. ಮಾರ್ಕೆಟ್ ನ ಉತ್ಪನ್ನ ಗಳಿಗೆ ಹೋಲಿಸಿದರೆ ಕಡಿಮೆ ಬೆಲೆ, ಆದರೆ ಕ್ವಾಲಿಟಿ ವಿಚಾರದಲ್ಲಿ, ಡಿಟರ್ಜೆಂಟ್ ಸಂಪರ್ಕಕ್ಕೆ ಬರುವ ಚರ್ಮದ ಹಿತವನ್ನು ಗಮನಿಸಿದರೆ ಉತ್ತಮ ಗುಣಮಟ್ಟ ಹೊಂದಿದೆ. ಇವರು ನಾವು ಬಳಸಿ ಖಾಲಿಯಾದ ಕ್ಯಾನ್ ಗಳನ್ನು ಸ್ವೀಕರಿಸಿ ಮತ್ತೆ ತುಂಬಿಸಿ ಕೊಡುವುದರಿಂದ ಪ್ಲಾಸ್ಟಿಕ್ ಬಳಕೆಯು ಮಿತವಾಗುತ್ತದೆ, ಪರಿಸರ ಸ್ನೇಹಿ ಆಗಿದೆ. ಹೋಮ್ ಡೆಲಿವರಿ ಸೌಲಭ್ಯ ಇರುವುದು ಅನುಕೂಲವೂ ಆಗಿದೆ. ನಾನು ಸಿಯೋ ಪ್ರಾಡಕ್ಟ್ ಗಳನ್ನು ಉಪಯೋಗಿಸಿ ಅನುಭವದಿಂದ ನನ್ನ ಸ್ನೇಹಿತರಿಗೆ, ನೆರೆಹೊರೆಯ ಮಂದಿಗೆ ಇದನ್ನು ಶಿಫಾರಸು ಮಾಡುತ್ತೇನೆ.
ನೀವೂ ಬಳಸಿ ನೋಡಿ.
Dr. Vidya Gowtham Kulamarva
ನಮಸ್ತೇ. ಸಿಯೋ ಲಿಕ್ವಿಡ್ ಡಿಟರ್ಜೆಂಟ್ ತುಂಬಾ ಒಳ್ಳೆ ಪ್ರಾಡಕ್ಟ್. ನಮ್ಮ ಮನೆಯಲ್ಲಿ ಸೀಯೋ ಡಿಟರ್ಜೆಂಟ್ ಉಪಯೋಗಿಸುವುದು ಸುಮಾರು ಒಂದು ವರ್ಷ ಆಯಿತು. ಬಟ್ಟೆ ಒಗೆಯುವ ಮತ್ತು ಪಾತ್ರೆ ತೊಳೆಯುವ ಎರಡೂ ಪ್ರಾಡಕ್ಟ್ ಉಪಯೋಗಿಸುತ್ತೇವೆ. ವಿಶೇಷವೆಂದರೆ ಮಾರುಕಟ್ಟೆಯಲ್ಲಿ ಇರುವ ಎಷ್ಟೋ ಬ್ರಾಂಡೆಡ್ ಪ್ರಾಡಕ್ಟ್ ಒಂದಿಗೆ ಸರಿ ಸಾಟಿಯಾಗಿ ಇರುವ ಉತ್ತಮ ಪ್ರಾಡಕ್ಟ್.
ನಾನು ಹೇಳುವುದಾದರೆ BUY LOCAL, USE LOCAL and PROMOTE LOCAL
- Rajashekhar Bhat kakunje